Telegram Join My Telegram WhatsApp Join My WhatsApp

BREAKING News: ಕರ್ನಾಟಕ ವೈದ್ಯರ ಮುಷ್ಕರ 2026 ಅಂತ್ಯ; ನಾಳೆಯಿಂದ OPD ಲಭ್ಯ!!!

ಕರ್ನಾಟಕ ವೈದ್ಯರ ಮುಷ್ಕರ 2026 ಅಪ್‌ಡೇಟ್ಸ್: ಇಂದಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ

2026ರ ಮಾರ್ಚ್ 11 ರಿಂದ ನಡೆಯಬೇಕಿದ್ದ ಸರ್ಕಾರಿ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಸರ್ಕಾರ ಮತ್ತು ವೈದ್ಯಾಧಿಕಾರಿಗಳ ಸಂಘದ ನಡುವೆ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದ್ದು, ವೈದ್ಯರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.

1. ಮುಷ್ಕರ ಹಿಂಪಡೆಯಲಾಗಿದೆ

​ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಮಾರ್ಚ್ 11 ರಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಟ್ಟಿದೆ. ಇದರಿಂದಾಗಿ ನಾಳೆಯಿಂದ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಸೇವೆ (OPD) ಎಂದಿನಂತೆ ಲಭ್ಯವಿರುತ್ತದೆ.

​2. ಸಂಧಾನ ಸಭೆ ಯಶಸ್ವಿ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಚಿವ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೈದ್ಯರ ಬೇಡಿಕೆಗಳಿಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
​ವೈದ್ಯರು ಮಂಡಿಸಿದ್ದ 14 ಬೇಡಿಕೆಗಳ ಪೈಕಿ 13 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಭರವಸೆ ನೀಡಿದೆ.
​ಈ ಬೇಡಿಕೆಗಳನ್ನು ಮುಂದಿನ 3 ತಿಂಗಳ ಒಳಗಾಗಿ ಹಂತ ಹಂತವಾಗಿ ಈಡೇರಿಸುವುದಾಗಿ ಸರ್ಕಾರ ತಿಳಿಸಿದೆ.

ಪ್ರಮುಖ ಅಂಶಗಳು:

  1. OPD ಸೇವೆಗಳು ಲಭ್ಯ: ನಾಳೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಸೇವೆಗಳು (OPD) ಎಂದಿನಂತೆ ಇರಲಿವೆ.
  2. ​ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಗಳ ಈಡೇರಿಕೆ: ವೈದ್ಯರು ಮಂಡಿಸಿದ್ದ 14 ಬೇಡಿಕೆಗಳಲ್ಲಿ 13ಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.
  3. ​ಸಮಯಾವಕಾಶ: ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ

ಕರ್ನಾಟಕ ವೈದ್ಯರ ಮುಷ್ಕರ 2026 ರ
ಪ್ರಮುಖ ಬೇಡಿಕೆಗಳು ಇಂತಿವೆ…

1. ವೃಂದ ಮತ್ತು ನೇಮಕಾತಿ (C&R) ನಿಯಮಗಳ ತಿದ್ದುಪಡಿ

​ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ವೈದ್ಯರ ಮುಷ್ಕರ 2026 ರ
ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಸರ್ಕಾರ ಒಪ್ಪಿಗೆ ನೀಡಿದೆ.

  • ನಿರ್ಧಾರ: ಮುಂದಿನ 2 ತಿಂಗಳೊಳಗೆ ಎಲ್ಲಾ ವೃಂದಗಳ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
  • ​ಬಡ್ತಿಗೆ ಅಡ್ಡಿಯಾಗಿರುವ ನಿಯಮಗಳನ್ನು ಸರಿಪಡಿಸಲು ಪ್ರತ್ಯೇಕ ‘ಎಕ್ಸಿಕ್ಯೂಟಿವ್ ಆರ್ಡರ್’ (Executive Order) ಹೊರಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

​2. ಜ್ಯೇಷ್ಠತಾ ಪಟ್ಟಿ (Seniority List) ಪ್ರಕಟಣೆ

ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ಕಳೆದ 13 ವರ್ಷಗಳಿಂದ ವೈದ್ಯಾಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆಯಾಗಿರಲಿಲ್ಲ. ಇದನ್ನು ಕೂಡಲೇ ಸರಿಪಡಿಸಲು ಆದೇಶಿಸಲಾಗಿದೆ.

  • ನಿರ್ಧಾರ: 20 ಮತ್ತು 13 ವರ್ಷ ಸೇವೆ ಸಲ್ಲಿಸಿದವರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಒಂದು ವಾರದೊಳಗೆ ಪ್ರಕಟಿಸಲಾಗುವುದು.
  • ​ಆಯುಕ್ತರ ಕಚೇರಿಯಿಂದ ಮಾಹಿತಿ ಬಂದ ತಕ್ಷಣ ವೈದ್ಯಾಧಿಕಾರಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು.

​3. ಎಲ್ಲಾ ವೃಂದಗಳ ಮುಂಬಡ್ತಿ (Promotions) ಪ್ರಕ್ರಿಯೆ

ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ಕರ್ನಾಟಕ ವೈದ್ಯರ ಮುಷ್ಕರ 2026 ರ ​ಬಡ್ತಿ ಸಿಗದೆ ವಯೋನಿವೃತ್ತಿ ಹೊಂದುತ್ತಿದ್ದ ಹಿರಿಯ ವೈದ್ಯರಿಗೆ ಇದು ಸಿಹಿ ಸುದ್ದಿಯಾಗಿದೆ.

  • ​ನಿರ್ಧಾರ: ‘ಎ’ ವೃಂದದ ವೈದ್ಯರಿಗೆ ನಿಯಮ 32ರ ಅಡಿ ಜಂಟಿ ನಿರ್ದೇಶಕ ಮತ್ತು ಅಪರ ನಿರ್ದೇಶಕ ಹುದ್ದೆಗಳಿಗೆ ಬಡ್ತಿ ನೀಡಲಾಗುವುದು.
  • ​’ಬಿ’, ‘ಸಿ’ ಮತ್ತು ‘ಡಿ’ ವೃಂದದ ನೌಕರರ ಪದೋನ್ನತಿ ಪ್ರಕ್ರಿಯೆಯನ್ನು ಮುಂದಿನ 2 ತಿಂಗಳೊಳಗೆ ಅಂತಿಮಗೊಳಿಸಲು ಸೂಚಿಸಲಾಗಿದೆ.

​4. ಸೇವಾನಿರತ ನೌಕರರ ಉನ್ನತ ವ್ಯಾಸಂಗ

​ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಉನ್ನತ ವ್ಯಾಸಂಗ (Post Graduation) ಮಾಡಲು ಇಚ್ಛಿಸುವ ನೌಕರರಿಗೆ ಇದ್ದ ಅಡೆತಡೆಗಳನ್ನು ನಿವಾರಿಸಲು ಚರ್ಚಿಸಲಾಗಿದೆ.

  • ​ನಿರ್ಧಾರ: ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ಮತ್ತು ಕಾನೂನು ಪ್ರಕಾರವಾಗಿ ಉನ್ನತ ವ್ಯಾಸಂಗಕ್ಕೆ ಅನುಮತಿ ನೀಡಲು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

5. ವರ್ಗಾವಣೆ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿ (Transfer Guidelines)

ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ.

  • ನಿರ್ಧಾರ: ಕಳೆದ ವರ್ಷ ವರ್ಗಾವಣೆ ಸಮಯದಲ್ಲಿ ಎದುರಾಗಿದ್ದ ತಾಂತ್ರಿಕ ಮತ್ತು ಕಾನೂನು ಅಡೆತಡೆಗಳನ್ನು ನಿವಾರಿಸಲು ಕಾನೂನು ಇಲಾಖೆಯ ಸಲಹೆ ಪಡೆಯಲಾಗುವುದು.
  • ಹೊಸದಾಗಿ ವೈಜ್ಞಾನಿಕ ಮಾರ್ಗಸೂಚಿಗಳನ್ನು (Guidelines) ರೂಪಿಸಿ, ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
  • ​ಗ್ರೂಪ್-ಸಿ ಮತ್ತು ಡಿ ನೌಕರರಿಗೆ ಆದ್ಯತೆ: ಸಿ ಮತ್ತು ಡಿ ವೃಂದದ ನೌಕರರ ವರ್ಗಾವಣೆಯನ್ನು ಸಾಧ್ಯವಾದಷ್ಟು ಅವರ ಸ್ವಂತ ಜಿಲ್ಲೆಗಳಲ್ಲಿ ಅಥವಾ ಸಮೀಪದ ಜಿಲ್ಲೆಗಳಲ್ಲಿ ಮಾಡಿಕೊಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

​6. ಜಿಲ್ಲಾ ಆಸ್ಪತ್ರೆ ಮತ್ತು ಸ್ವಾಯತ್ತ ಸಂಸ್ಥೆಗಳ ಹುದ್ದೆಗಳ ಭರ್ತಿ

ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಹೊಂದಿಕೊಂಡಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಚರ್ಚಿಸಲಾಗಿದೆ.

  • ನಿರ್ಧಾರ: ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಆರೋಗ್ಯ ಇಲಾಖೆಯ ಹುದ್ದೆಗಳಿಗೆ ವರ್ಗಾವಣೆ ಅಥವಾ ಬಡ್ತಿ ಮೂಲಕ ನೇಮಕ ಮಾಡುವಾಗ ಕೌನ್ಸೆಲಿಂಗ್ (Counseling) ಪದ್ಧತಿಯನ್ನು ಅನುಸರಿಸಲಾಗುವುದು.
  • ​ಈಗಾಗಲೇ ಅಸ್ತಿತ್ವದಲ್ಲಿರುವ ಪದ್ಧತಿಯನ್ನು ಮುಂದುವರಿಸುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.
  • ಕಾನೂನು ಹೋರಾಟ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಅಂತಿಮ ತೀರ್ಪಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚಿಸಲಾಗಿದೆ.

7. ಸಮರ್ಪಕ ಔಷಧ ಪೂರೈಕೆ 

​ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಿಂದ ರೋಗಿಗಳು ಮತ್ತು ವೈದ್ಯರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

  • ಔಷಧ ಲಭ್ಯತೆ ಖಾತರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಸ್ಪತ್ರೆಗಳಲ್ಲಿ ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ಹೊಸ ಟೆಂಡರ್ ಪ್ರಕ್ರಿಯೆ: ಕೆ.ಎಸ್.ಎಂ.ಎಸ್.ಸಿ.ಎಲ್ (KSMSCL) ಸಂಸ್ಥೆಯ ಮೂಲಕ 500ಕ್ಕೂ ಹೆಚ್ಚು ಹೊಸ ಔಷಧಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಗುಣಮಟ್ಟದ ಔಷಧಗಳನ್ನು ಹಂತ ಹಂತವಾಗಿ ಎಲ್ಲಾ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಲಾಗುವುದು.
  • ತಕ್ಷಣದ ಅನುದಾನ: ತುರ್ತು ಔಷಧ ಖರೀದಿಗಾಗಿ ಕೆ.ಎಸ್.ಎಂ.ಎಸ್.ಸಿ.ಎಲ್ ಸಂಸ್ಥೆಯಿಂದ ಒಟ್ಟಾರೆ 30 ಕೋಟಿ ರೂಪಾಯಿಗಳನ್ನು ಈಗಾಗಲೇ ಆಯಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.
  • ಎ.ಬಿ.ಎಆರ್.ಕೆ (AB-ARK) ಅನುದಾನದ ಬಳಕೆ: ಲಭ್ಯವಿರುವ ಎ.ಬಿ.ಎಆರ್.ಕೆ ಅನುದಾನವನ್ನು ತುರ್ತು ಸಂದರ್ಭಗಳಲ್ಲಿ ಔಷಧ ಖರೀದಿಗೆ ಬಳಸಲು ಇರುವ ಅವಕಾಶಗಳ ಬಗ್ಗೆ ಚರ್ಚಿಸಲಾಗಿದ್ದು, ನಿರಂತರವಾಗಿ ಔಷಧ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

8. ಖಾಲಿ ಹುದ್ದೆಗಳ ನೇಮಕಾತಿ (Recruitment of Vacant Posts)

ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ​ಆರೋಗ್ಯ ಇಲಾಖೆಯಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಲು ಹೊಸ ನೇಮಕಾತಿಗೆ ಸರ್ಕಾರ ಚಾಲನೆ ನೀಡಿದೆ.

  • ಹಂತ ಹಂತವಾಗಿ ಭರ್ತಿ: ಇಲಾಖೆಯಲ್ಲಿ ಸುಮಾರು ಶೇ. 40 ರಷ್ಟು ಹುದ್ದೆಗಳು ಖಾಲಿ ಇರುವುದು ಸಭೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಹಣಕಾಸು ಇಲಾಖೆಯ ಸಹಮತಿಯೊಂದಿಗೆ ತೀರಾ ಅಗತ್ಯವಿರುವ ಹುದ್ದೆಗಳನ್ನು ತುಂಬಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
  • ಜನಸಂಖ್ಯೆಗೆ ಅನುಗುಣವಾಗಿ ಹುದ್ದೆ ಸೃಜನೆ: 1998ರ ಅಂಕಿ-ಅಂಶಗಳ ಆಧಾರದ ಮೇಲೆ ಹುದ್ದೆಗಳನ್ನು ಸೃಜಿಸಲಾಗಿತ್ತು. ಈಗ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹೊಸ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

​9. ಎಂ.ಸಿ.ಎಚ್ (MCH) ತಜ್ಞರ ಮರುಹೊಂದಾಣಿಕೆ

​ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸಲು ತಜ್ಞ ವೈದ್ಯರ ಮರುಹಂಚಿಕೆ ಮಾಡಲಾಗುತ್ತಿದೆ.

  • ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ಹಂತ ಹಂತವಾಗಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ (CHC) ಮೇಲ್ದರ್ಜೆಗೇರಿಸಲಾಗುವುದು.
  • ​ತಜ್ಞರ ನಿಯೋಜನೆ: ಕಡಿಮೆ ಕಾರ್ಯನಿರ್ವಹಣೆ (Low performing) ಇರುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ಎಂ.ಸಿ.ಎಚ್ (ತಾಯಿ ಮತ್ತು ಮಕ್ಕಳ ಆರೋಗ್ಯ) ತಜ್ಞರನ್ನು, 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಗಳಿಗೆ ಮರುಹಂಚಿಕೆ (Redeployment) ಮಾಡಲಾಗಿದೆ. ಇದರಿಂದ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ.
  • ​ಸಚಿವ ಸಂಪುಟದ ಅನುಮೋದನೆ: ಈ ನಿರ್ಧಾರಕ್ಕೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದ್ದು, ಜಾರಿಗೊಳಿಸಲು ಸಿದ್ಧತೆ ನಡೆದಿದೆ.
  • 24/7 ಸೇವೆ: ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಂ.ಸಿ.ಎಚ್. (MCH) ತಜ್ಞರ ಹಂಚಿಕೆಯನ್ನು ಸಮನಾಗಿ ಮಾಡಿ, ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆ 24 ಗಂಟೆಯೂ ಲಭ್ಯವಾಗುವಂತೆ ಖಾತರಿಪಡಿಸಲಾಗುವುದು.
  • ವೈದ್ಯರ ಮರುಹಂಚಿಕೆ (Redeployment): ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯ ಎಂಬಿಬಿಎಸ್ ಪದವೀಧರ ವೈದ್ಯರನ್ನು ನಿಯೋಜಿಸುವ ಮೂಲಕ ಸ್ಥಳೀಯವಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು.

10. ನಿಯೋಜನೆ ಹುದ್ದೆಗಳ ರದ್ದತಿ ಮತ್ತು ಮರುಪರಿಶೀಲನೆ (Deputation)

​ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ಅನಗತ್ಯ ನಿಯೋಜನೆಗಳಿಂದ ಆರೋಗ್ಯ ಸೇವೆಯಲ್ಲಿ ಆಗುತ್ತಿದ್ದ ವ್ಯತ್ಯಯಗಳನ್ನು ಸರಿಪಡಿಸಲು ನಿರ್ಧರಿಸಲಾಗಿದೆ.

  • ತಾಂತ್ರಿಕ ನಿಯೋಜನೆ: ಅನಿವಾರ್ಯವಲ್ಲದ ಕಡೆಗಳಲ್ಲಿ ಇರುವ ನಿಯೋಜನೆ ಹುದ್ದೆಗಳನ್ನು ರದ್ದುಗೊಳಿಸುವ ಅಥವಾ ಪರಿಷ್ಕರಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
  • ​ಹೊಸ ಹುದ್ದೆಗಳ ಸೃಜನೆ: ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ (ಉದಾಹರಣೆಗೆ GBA ವ್ಯಾಪ್ತಿಯಲ್ಲಿ) ಹೊಸದಾಗಿ ಅಧಿಕಾರಿಗಳ ಹುದ್ದೆಗಳನ್ನು ಸೃಷ್ಟಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

11. ಗುತ್ತಿಗೆ ವೈದ್ಯರು ಮತ್ತು ನೌಕರರ ಸಮಸ್ಯೆಗಳು (Contract Employees)​

ದೀರ್ಘಕಾಲದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಬೇಡಿಕೆಗಳಿಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

  • ಏಕರೂಪದ ನೀತಿ: ಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ವಿಷಯವು ಕೇವಲ ಆರೋಗ್ಯ ಇಲಾಖೆಗೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಇಲಾಖೆಗಳಿಗೆ ಅನ್ವಯವಾಗುವ ಸರ್ಕಾರದ ಸಾಮಾನ್ಯ ನೀತಿಗೆ ಒಳಪಟ್ಟಿರುತ್ತದೆ.
  • ಆದ್ಯತೆ: ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆಯಡಿ ಶ್ರಮಿಸುತ್ತಿರುವ ನೌಕರರ ಹಿತರಕ್ಷಣೆಗಾಗಿ ಸರ್ಕಾರದ ಚೌಕಟ್ಟಿನೊಳಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಗಿದೆ.
  • ವೇತನ ಹೆಚ್ಚಳ: NHM ಸಿಬ್ಬಂದಿಗಳ ವೇತನವನ್ನು ಪ್ರತಿ ವರ್ಷ ಶೇ. 5 ರಷ್ಟು ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ಸಮಯಕ್ಕೆ ಸರಿಯಾಗಿ ವೇತನ: ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ವೇತನ ಪಾವತಿಯಾಗುವಂತೆ ಆಡಳಿತಾತ್ಮಕ ಸುಧಾರಣೆ ತರಲಾಗುವುದು.
  • ನೇರ ನೇಮಕಾತಿಯಲ್ಲಿ ಆದ್ಯತೆ: ವಿಶೇಷ ನೇರ ನೇಮಕಾತಿ ಸಂದರ್ಭದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದವರಿಗೆ ವಯಸ್ಸಿನ ಸಡಿಲಿಕೆ (Age Relaxation) ಮತ್ತು ಸೇವಾ ಕೃಪಾಂಕಗಳನ್ನು (Weightage) ನೀಡುವ ಬಗ್ಗೆ ಸಕಾರಾತ್ಮಕವಾಗಿ ಚರ್ಚಿಸಲಾಗಿದೆ.

12. ಕರ್ತವ್ಯದ ಅವಧಿಯ ನಂತರ ಖಾಸಗಿ ವೈದ್ಯಕೀಯ ಸೇವೆ (Private Practice)

ಸರ್ಕಾರಿ ವೈದ್ಯರು ಆಸ್ಪತ್ರೆಯ ಕೆಲಸದ ಅವಧಿಯ ನಂತರ ಖಾಸಗಿ ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸುವ ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

  • ​ಸಾರ್ವಜನಿಕ ಸೇವೆಗೆ ಆದ್ಯತೆ: ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ (In-Patients) ನಿರಂತರ ಚಿಕಿತ್ಸೆ ಅಗತ್ಯವಿರುವುದರಿಂದ, ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯಾಗಬಹುದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
  • ನಿರ್ಬಂಧಗಳು (Conditional Restrictions): ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ, ವೈದ್ಯರ ಖಾಸಗಿ ವೈದ್ಯಕೀಯ ಸೇವೆಯನ್ನು ನಿಯಂತ್ರಿಸಲು ಸೀಮಿತವಾದ ನಿರ್ಬಂಧಗಳನ್ನು (Conditional restrictions) ವಿಧಿಸಲು ನಿರ್ಧರಿಸಲಾಗಿದೆ.
  • ಸರ್ಕಾರದ ಬದ್ಧತೆ: ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ನಿಯಮಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

13. ವೇತನ ತಾರತಮ್ಯ ನಿವಾರಣೆ (Pay Parity)

​ಆರೋಗ್ಯ ಇಲಾಖೆಯ ವಿವಿಧ ವೃಂದದ ವೈದ್ಯರು ಮತ್ತು ಸಿಬ್ಬಂದಿಗಳ ನಡುವೆ ಇರುವ ವೇತನ ವ್ಯತ್ಯಾಸವನ್ನು ಸರಿಪಡಿಸಲು ಬೇಡಿಕೆ ಸಲ್ಲಿಸಲಾಗಿದೆ.

  • ​ಸಿಜಿಹೆಚ್‌ಎಸ್ (CGHS) ಮಾದರಿ: ಆರೋಗ್ಯ ಸಂಸ್ಥೆಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇಎಸ್‌ಐ (ESI) ನೌಕರರ ವೇತನಕ್ಕೆ ಹೋಲಿಸಿದರೆ ರಾಜ್ಯ ಆರೋಗ್ಯ ಇಲಾಖೆಯ ವೈದ್ಯರ ವೇತನದಲ್ಲಿ ತಾರತಮ್ಯವಿದೆ. ಇದನ್ನು ಸರಿಪಡಿಸಲು
  • ಸಿಜಿಹೆಚ್‌ಎಸ್ ಮಾದರಿಯಲ್ಲಿ ವೇತನ ನೀಡುವಂತೆ ವೈದ್ಯರ ಸಂಘವು ಆಗ್ರಹಿಸಿದೆ. ಸರ್ಕಾರವು ಈ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲಿಸಲು ಒಪ್ಪಿದೆ.

14. ತಾಯಿ ಮರಣ ಪ್ರಕರಣಗಳ ಇಳಿಕೆಗೆ ಸಮಿತಿ ರಚನೆ (Maternal Mortality Rate – MMR)

ಕರ್ನಾಟಕ ವೈದ್ಯರ ಮುಷ್ಕರ 2026 ರ ಬೇಡಿಕೆಯಲ್ಲಿ ಒಂದಾದ ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಿ ಮರಣ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ತಾಂತ್ರಿಕ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.

  • ಸಮನ್ವಯ ಸಮಿತಿ: ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ *’ಅಂತರ ಇಲಾಖಾ ಉನ್ನತ ಮಟ್ಟದ ಸಮನ್ವಯ ಸಮಿತಿ’*ಯನ್ನು ರಚಿಸಲಾಗುವುದು.
  • ​ತಜ್ಞ ವೈದ್ಯರ ನೇಮಕ: ಈ ಸಮಿತಿಯಲ್ಲಿ ಕೇವಲ ಐಎಎಸ್ (IAS) ಅಧಿಕಾರಿಗಳು ಮಾತ್ರವಲ್ಲದೆ, ವೈದ್ಯಕೀಯ ಅಥವಾ ತಾಂತ್ರಿಕ ಅರ್ಹತೆ ಹೊಂದಿರುವ ಒಬ್ಬರು ನಿವೃತ್ತ ತಜ್ಞ ವೈದ್ಯರನ್ನು ನೇಮಿಸಲು ಸಚಿವರು ಸಲಹೆ ನೀಡಿದ್ದಾರೆ. ಇದು ತಾಂತ್ರಿಕವಾಗಿ ಸಮಿತಿಯನ್ನು ಬಲಪಡಿಸಲಿದೆ.

ಮೂಲ ಮತ್ತು ಹಕ್ಕುತ್ಯಾಗ (Source & Disclaimer)

ಮಾಹಿತಿ ಆಧಾರ (Source): ಈ ಲೇಖನವು ದಿನಾಂಕ 10.03.2026 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಸಭೆಯ ನಡವಳಿಗಳ (Meeting Proceedings) ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

ಮಾಹಿತಿಯು ಕೇವಲ ಸಾರ್ವಜನಿಕ ಜಾಗೃತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ಇದು ಆರೋಗ್ಯ ಇಲಾಖೆಯ ಸಭೆಯ ನಿರ್ಧಾರಗಳ ಸಾರಾಂಶವಾಗಿದ್ದು, ಯಾವುದೇ ವೈಯಕ್ತಿಕ ಸಲಹೆಯಲ್ಲ.

ಅಧಿಕೃತ ಪ್ರಕಟಣೆ: ಈ ನಿರ್ಧಾರಗಳ ಅಧಿಕೃತ ಅನುಷ್ಠಾನ ಮತ್ತು ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಸರ್ಕಾರಿ ಆದೇಶಗಳನ್ನು (Government Orders) ಗಮನಿಸಲು ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ –

  1. https://karunadu.karnataka.gov.in/hfw/kannada/
  2. https://karunadu.karnataka.gov.in/hfw/nhm/

ಮುಕ್ತಾಯ:

​ಅಂತಿಮವಾಗಿ, ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯು ಎಲ್ಲಾ 14 ಪ್ರಮುಖ ಬೇಡಿಕೆಗಳಿಗೆ ಪರಿಹಾರದ ಹಾದಿಯನ್ನು ಕಂಡುಕೊಂಡಿದೆ.

ಇನ್ನೂ ಹೆಚ್ಚಿಗೆ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ – ಹಾಗೂ ನಮ್ಮ What’s app and Telegram Channel Group ಗೆ Join ಆಗಿ

AIIMS NORCET 2026: 2500+ Nursing Officer ಉದ್ಯೋಗದ ಸುವರ್ಣಾವಕಾಶ!!! ಅರ್ಜಿ ಪ್ರಕ್ರಿಯೆ ಆರಂಭ Exclusive Update…

Leave a Comment