ಪ್ರತಿದಿನ ಆರೋಗ್ಯವಾಗಿರಲು 7 Daily Health Tips ಅವುಗಳ ಮಾಹಿತಿ

ಶೀರ್ಷಿಕೆ: ನಿಮ್ಮ ದಿನವನ್ನು ಆರೋಗ್ಯವಾಗಿ ಆರಂಭಿಸಿ!
ಆರೋಗ್ಯವೇ ಭಾಗ್ಯ ಎಂಬ ಮಾತು ಇಂದಿಗೂ ಸತ್ಯ. ಇಂದಿನ ಒತ್ತಡದ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹಾಗೂ ನಮ್ಮ ದೈನಂದಿನ ಜೀವನ ಹೇಗೆ ಶುರುವಾಗುತ್ತದೆ ಎಂಬುದು ನಮ್ಮ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹಲವಾರು ಜನ ಬೆಳಿಗ್ಗೆ ತಡವಾಗಿ ಎದ್ದು ಆತುರದಲ್ಲಿ ದಿನವನ್ನು ಆರಂಭಿಸುತ್ತಾರೆ. ಇದರಿಂದ ಮಾನಸಿಕ ಒತ್ತಡ, ದೌರ್ಬಲ್ಯ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
“ಆರೋಗ್ಯವೇ ಭಾಗ್ಯ! ನಾವು ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಸಣ್ಣ ಬದಲಾವಣೆಗಳು ನಮ್ಮ ಇಡೀ ದಿನದ ಉತ್ಸಾಹವನ್ನು ನಿರ್ಧರಿಸುತ್ತವೆ. ಹೆಚ್ಚಿನ ನೀರು ಕುಡಿಯುವುದರಿಂದ ಹಿಡಿದು ಸರಿಯಾದ ಸಮಯಕ್ಕೆ ನಿದ್ರೆ ಮಾಡುವವರೆಗೆ, ಆರೋಗ್ಯವಾಗಿರಲು ಈ 7 Daily Health Tips ಗಳನ್ನು ಇಂದೇ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಆದ್ದರಿಂದ ಬೆಳಗಿನ ಜಾವ ಕೆಲವೊಂದು ಆರೋಗ್ಯ ಸಲಹೆಗಳನ್ನು ಪಾಲಿಸುವುದು ನಮ್ಮ ದೈನಂದಿನ ಜೀವನಕ್ಕೆ ತುಂಬಾ ಮುಖ್ಯವಾಗಿರುತ್ತದೆ.
ಆದ್ದರಿಂದ
ಪ್ರತಿದಿನ ಆರೋಗ್ಯವಾಗಿರಲು 7 Daily Health Tips
ಈ ಕೆಳಗಿನಂತಿವೆ…
ಸಲಹೆಗಳನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ
ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಿರಿ
ಪ್ರತಿದಿನ ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ ಬೆಳಿಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಕೇವಲ ಒಂದು ಸರಳ ರೂಢಿ ಅಲ್ಲ. ಇದನ್ನು ನೀವು ದಿನಾಲೂ ರೂಢಿ ಮಾಡಿಕೊಂಡರೆ ನಿಮ್ಮ ದೇಹದಲ್ಲಿನ ಕಲ್ಮಶಗಳನ್ನು ದೇಹ ಕ್ರಮೇಣ ಹೊರಹಾಕಲು ಪ್ರಾರಂಭಿಸುತ್ತದೆ..
ಇದರ ಉಪಯೋಗಗಳು:
- ಜೀರ್ಣಕ್ರಿಯೆ ಉತ್ತಮವಾಗುತ್ತದೆ: ಬೆಚ್ಚಗಿನ ನೀರು ಕರುಳಿನ ಚಲನೆಯನ್ನು ಉತ್ತಮಗೊಳಿಸಿ, ಮಲಬದ್ಧತೆ ಆಗುವುದನ್ನು ತಡೆಗಟ್ಟುತ್ತದೆ.
- ಪಚನ ಕ್ರಿಯೆ ಉತ್ತಮವಾಗುತ್ತದೆ: ಇದು ದೇಹದ ಪಚನ ಕ್ರಿಯೆಯನ್ನು ವೇಗಗೊಳಿಸಿ, ಇದು ದಿನವಿಡಿ ದೇಹದ ಕೊಬ್ಬು ಕರಗಲು ಸಹಾಯ ಮಾಡುತ್ತದೆ.
- ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ:
ದೇಹದಲ್ಲಿನ ಹೆಚ್ಚಿನ ಪಚನ ಕ್ರಿಯೆ ಹಾಗೂ ದೇಹದಲ್ಲಿನ ಅಧಿಕ ಪ್ರಮಾಣದ ಕಲ್ಮಶಗಳನ್ನು ಹೊರಹಾಕುವರಿಂದ,ದೇಹದ ಕೊಬ್ಬು ಕರಗುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. - ದೇಹದ ಚರ್ಮದ ಹೊಳಪು ಹೆಚ್ಚಾಗಲು ಸಹಾಯ ಮಾಡುತ್ತದೆ:
ದೇಹವು ತನ್ನಲ್ಲಿರುವ ವಿಷಕಾರಿ ಕಲ್ಮಶಗಳನ್ನು ಹೊರಹಾಕುವರಿಂದ ದೇಹದ ಚರ್ಮಕ್ಕೆ ತಾನಾಗೆ ಹೊಳಪು ಬರಲು ಪ್ರಾರಂಭಿಸುತ್ತದೆ.
ದಿನಾಲೂ ಬೆಳಿಗ್ಗೆ ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವುದು ಉತ್ತಮ:
ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ ಪ್ರತಿದಿನವೂ ಬೆಳಿಗ್ಗೆ ಕನಿಷ್ಠ 30-40 ನಿಮಿಷ ವ್ಯಾಯಾಮ, ಯೋಗ ಮಾಡುವುದರಿಂದ ಇಡೀ ದಿನ ನಿಮ್ಮ ದೇಹವು ಉತ್ಸುಕತೆ ಕೂಡಿ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಮಾಡಲು ಸಹಾಯ ಮಾಡುತ್ತದೆ.
ದಿನಾಲೂ ನೀವು ಮಾಡಬಹುದಾದ ಸರಳ ವ್ಯಾಯಾಮಗಳು:
- ನಡೆಯುವುದು:
ಮುಂಜಾನೆಯ ಗಾಳಿಯಲ್ಲಿ ವಾಕಿಂಗ್ ಮಾಡುವುದರಿಂದ ಮನಸ್ಸು ಹಗುರವಾಗುವುದಲ್ಲದೆ ಮನಸ್ಸಿಗೆ ಹಿತ ನೀಡುತ್ತದೆ.. - ಪ್ರಾಣಾಯಾಮ:
ಆಳವಾಗಿ ಉಸಿರು ತೆಗೆದುಕೊಳ್ಳುವುದು ಮತ್ತು ನಿಧಾನವಾಗಿ ಹೊರಹಾಕುವ ಅಭ್ಯಾಸ ಮಾಡೋದರಿಂದ ಮನಸ್ಸು ಶಾಂತವಾಗಿ concentrate ಮಾಡೋದು ಸುಲಭವಾಗುತ್ತದೆ.
ಉಸಿರಾಟದ ವ್ಯಾಯಾಮಗಳು ಮಾಡುವುದರಿಂದ ಮನಸ್ಸಿನ, ಏಕಾಗ್ರತೆಯನ್ನು ಹೆಚ್ಚಿಸುತ್ತವೆ. - ಸೂರ್ಯ ನಮಸ್ಕಾರ: ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ನೀಡುವ ಒಂದು ಸಮಗ್ರ ಯೋಗಾಸನ.
- ದೇಹದ ಸಡಿಲವಾಗಿ ಚಾಚುವುದು:
ಇದನ್ನು ಮಾಡುವುದರಿಂದ ದೇಹದ ಸ್ನಾಯುಗಳನ್ನು free ಆಗಿ, ರಕ್ತಸಂಚಾರವನ್ನು ಸುಧಾರಿಸುತ್ತದೆ.
ಪ್ರಯೋಜನಗಳು:
- ರಕ್ತಸಂಚಾರ ಸುಧಾರಣೆ: ವ್ಯಾಯಾಮವು ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ತಲುಪಿಸಿ, ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.
- ಒತ್ತಡ ಕಡಿಮೆ: ದೈಹಿಕ ಚಟುವಟಿಕೆಯು ದೇಹದಲ್ಲಿ ಸಂತೋಷ ಉಂಟು ಮಾಡುವ ರಸಾಯನವನ್ನು ಬಿಡುಗಡೆ ಮಾಡಿ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
- ದೇಹದ ತೂಕ ನಿಯಂತ್ರಣ: ನಿಯಮಿತ ವ್ಯಾಯಾಮವು ದೇಹದ ಉಷ್ಣ ಶಕ್ತಿಯನ್ನು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ದಿನವಿಡೀ ಚೈತನ್ಯ: ಬೆಳಗಿನ ವ್ಯಾಯಾಮವು ನಿಮಗೆ ದಿನವಿಡೀ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ.
ಮುಂಜಾನೆಯ ಸೂರ್ಯನ ಬೆಳಕು…
ಪ್ರತಿದಿನ ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ ಬೆಳಿಗ್ಗೆ 10–15 ನಿಮಿಷ ಸೂರ್ಯನ ಎಲೆ ಬಿಸಿಲಿನಲ್ಲಿ ನಡೆಯುವುದು ವಿಟಮಿನ್ D ಪಡೆಯಲು ಸಹಾಯಕ. ಸೂರ್ಯನ ಕಿರಣಗಳು ಕೇವಲ ವಿಟಮಿನ್ D ಮಾತ್ರವಲ್ಲದೆ, ನಿಮ್ಮ ಮನಸ್ಸಿಗೆ ಸಂತೋಷವನ್ನೂ ನೀಡುತ್ತವೆ.
ಇದರ ಲಾಭಗಳು:
- ಎಲುಬು ಗಟ್ಟಿಗೊಳ್ಳುತ್ತವೆ: ವಿಟಮಿನ್ D ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅವಶ್ಯಕವಾಗಿದ್ದು, ಎಲುಬುಗಳನ್ನು ಬಲಪಡಿಸುತ್ತದೆ.
- ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ವಿಟಮಿನ್ D ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳಿಂದ ರಕ್ಷಿಸುತ್ತದೆ.
- ಮನಸ್ಸು ಹಗುರವಾಗುತ್ತದೆ ಹಾಗೂ ಹೊಳೆಯುತ್ತದೆ: ಸೂರ್ಯನ ಬೆಳಕು ದೇಹದಲ್ಲಿ ಉತ್ಸಾಹವನ್ನು ಉಂಟು ಮಾಡುವ ರಾಸಾಯನಿಕ ಉತ್ಪಾದನೆಯನ್ನು ಉತ್ತೇಜಿಸಿ, ಮನಸ್ಸಿನ ಸ್ಥಿತಿಯನ್ನು ಸುಧಾರಿಸುತ್ತದೆ.
ಬೆಳಗಿನ ಉಪಹಾರ
ಪ್ರತಿದಿನ ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ ಬೆಳಿಗ್ಗೆ ಊಟ ಮಾಡದೇ ಇರುವುದು ಆರೋಗ್ಯಕ್ಕೆ ಹಾನಿಕಾರಕ. ಬೆಳಗಿನ ಉಪಾಹಾರವು ನಿಮ್ಮ ದಿನದ ಪ್ರಮುಖ ಊಟವಾಗಿದ್ದು, ಇದು ನಿಮ್ಮ ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ಯಾವದೇ ಕಾರಣಕ್ಕೂ ಬೆಳಗಿನ ಉಪಹಾರ ತಪ್ಪಿಸಬೇಡಿ.
ಬೆಳಗಿನ ಆಹಾರ ಬಿಟ್ಟರೆ ಆಗುವ ತೊಂದರೆಗಳು:
- ಗ್ಯಾಸ್ಟ್ರಿಕ್ ಮತ್ತು ಎದೆಯುರಿ (Acidity)
- ವಿಪರೀತ ಸುಸ್ತು ಮತ್ತು ನಿಶ್ಯಕ್ತಿ (Low Energy)
- ತಲೆನೋವು ಮತ್ತು ಸಿಡುಕುತನ.4. ಬಾಯಿ ದುರ್ವಾಸನೆ
ಆರೋಗ್ಯಕರ ಬೆಳಗಿನ ಉಪಹಾರದ ಆಯ್ಕೆಗಳು:
- ಇಡ್ಲಿ ಅಥವಾ ಉಪ್ಪಿಟ್ಟು: ಇವುಗಳು ಕಡಿಮೆ ಎಣ್ಣೆ ಮತ್ತು ಹೆಚ್ಚು ಶಕ್ತಿ ಕೊಡುವ ಅಂಶವನ್ನು ಹೊಂದಿದ್ದು, ಶಕ್ತಿಯನ್ನು ನೀಡುತ್ತವೆ.
- ಓಟ್ಸ್ ಧಾನ್ಯ: ನಾರಿನಂಶದಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ಉತ್ತಮ.
- ಹಣ್ಣುಗಳು: ವಿಟಮಿನ್ಗಳು ಮತ್ತು ಖನಿಜಗಳಿಂದ ತುಂಬಿದ್ದು, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ.
- ಕೋಳಿ ಮೊಟ್ಟೆ: ಇದು ದೇಹದ ಮಾಂಸಖಂಡಗಳು ಬೆಳೆಯಲು ಉತ್ತಮ ಮೂಲವಾಗಿದ್ದು, ಬಹಳ ಹೊತ್ತು ಹೊಟ್ಟೆ ತುಂಬಿದ ಹಾಗೆ ಆಗುತ್ತದೆ.
ಬೆಳಿಗ್ಗೆ ಉತ್ತಮ ಆಹಾರ ಸೇವಿಸಿದರೆ ದಿನವಿಡೀ ದೇಹ ಉತ್ಸಾಹದಿಂದ ಇರುತ್ತದೆ…
ಬೆಳಗಿನ ತಿಂಡಿ ರಾಜನಂತಿರಲಿ, ಮಧ್ಯಾಹ್ನದ ಊಟ ಮಂತ್ರಿಯಂತಿರಲಿ, ರಾತ್ರಿಯ ಊಟ ಭಿಕ್ಷುಕನಂತಿರಲಿ. – ಅಂದರೆ ಬೆಳಿಗ್ಗೆ ಚೆನ್ನಾಗಿ ತಿನ್ನಬೇಕು ಎಂಬುದು ಇದರ ಅರ್ಥ.
ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ
ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ ಬಹುತೇಕ ಜನರು ಎದ್ದ ಕೂಡಲೇ ಮೊಬೈಲ್ ಫೋನ್ ನೋಡುವ ಅಭ್ಯಾಸ ಹೊಂದಿದ್ದಾರೆ. ಇದು ಮನಸ್ಸಿಗೆ ಮಾನಸಿಕ ಒತ್ತಡ ಕಿರಿಕಿ ಉಂಟುಮಾಡಬಹುದು. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ನಿಂದ ದೂರವಿರುವುದು ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಹಿತ ನೀಡುತ್ತದೆ.
Mobile Phone Use ಮಾಡುವುದರಿಂದಾಗುವ ತೊಂದರೆಗಳು:
- ಕಣ್ಣಿನ ದೃಷ್ಟಿ ಮಂದವಾಗುವುದು (Eye Strain)
- ಕುತ್ತಿಗೆ ಮತ್ತು ಬೆನ್ನು ನೋವು (Neck & Back Pain)
- ನಿದ್ದೆ ಬಾರದಿರುವುದು (Insomnia)
- ಮಾನಸಿಕ ಒತ್ತಡ ಮತ್ತು ಕಿರಿಕಿರಿ (Stress & Anxiety)5. ಏಕಾಗ್ರತೆ ಕಡಿಮೆಯಾಗುವುದು
ನೆನಪಿಡಿ: Mobile ಅವಶ್ಯವಿದ್ದಲ್ಲಿ ಮಾತ್ರ ಉಪಯೋಗಿಸಬೇಕು , ಅವಶ್ಯಕತೆ ಮೀರಿ ಉಪಯೋಗಿಸಬಾರದು ಯಾಕಂದ್ರೆ ಅದೇ, ನಮಗೆ ಯಜಮಾನನಾಗಬಾರದು….
ಮೊಬೈಲ್ ಫೋನ್ use ಮಾಡುವ ಬದಲಿಗೆ: ಈ ಕೆಳಗಿನವುಗಳನ್ನು ಮಾಡಿ
- 5 ನಿಮಿಷ ಧ್ಯಾನ ಮಾಡಿ: ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ದಿನವನ್ನು ಉತ್ಸಾಹದಿಂದ ಪ್ರಾರಂಭಿಸಲು ಸಹಾಯ ಮಾಡುತ್ತದೆ.
- ದಿನದ ಗುರಿ ಯೋಜಿಸಿ: ನಿಮ್ಮ ದಿನದ ಕಾರ್ಯಗಳನ್ನು ಪ್ಲಾನ್ ಮಾಡುವುದರಿಂದ ಹೆಚ್ಚು ಉತ್ಸಾಹದಿಂದಿರಲು ಸಾಧ್ಯ.
- ಧನ್ಯವಾದ ಹೇಳುವ ಅಭ್ಯಾಸ ಬೆಳೆಸಿಕೊಳ್ಳಿ(Positive Feeling): ಕೃತಜ್ಞತೆಯ ಭಾವನೆಯು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.
ಧ್ಯಾನ ಮತ್ತು ಯೋಗ
ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ 5–10 ನಿಮಿಷ ಧ್ಯಾನ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ. ಧ್ಯಾನವು ನಿಮ್ಮ ಆಂತರಿಕ ಶಾಂತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಯೋಗ ಮತ್ತು ಧ್ಯಾನ ಎನ್ನುವುದು ಯಾವುದೋ ಒಂದು ಕಾಲಕ್ಕೆ ಸೀಮಿತವಾದುದಲ್ಲ, ಅದು ನಮ್ಮ ಹಿರಿಯರು ನಮಗೆ ಕೊಟ್ಟ ದೊಡ್ಡ ಆಸ್ತಿ. ನಮ್ಮ ಹಳ್ಳಿ ಭಾಷೆಯಲ್ಲಿ ಹೇಳುವುದಾದರೆ, “ಶರೀರ ಗಟ್ಟಿ ಇರಬೇಕು, ಮನಸ್ಸು ತಣ್ಣಗಿರಬೇಕು” ಎನ್ನುವ ಮಾತಿಗೆ ಯೋಗ ಮತ್ತು ಧ್ಯಾನವೇ ಸರಿಯಾದ ದಾರಿ.
ಇದರ ಉಪಯೋಗಗಳು:
- *ಆತಂಕ ಕಡಿಮೆ: ಧ್ಯಾನವು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
- ಏಕಾಗ್ರತೆ(Concentration) ಹೆಚ್ಚಳವಾಗುತ್ತದೆ: ನಿಯಮಿತ ಧ್ಯಾನವು ನಿಮ್ಮ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ.
- ಸಕಾರಾತ್ಮಕ ಚಿಂತನೆ:ಇದು ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳು ಬರುವಂತೆ ಮಾಡುತ್ತದೆ.
ಒಂದು ಮಾತು: “ಯೋಗ ಮಾಡಿದವನಿಗೆ ರೋಗವಿಲ್ಲ, ಧ್ಯಾನ ಮಾಡಿದವನಿಗೆ ಜಗಳವಿಲ್ಲ.”
ಸರಿಯಾದ ಸಮಯಕ್ಕೆ ನಿದ್ರೆ
ಆರೋಗ್ಯವಾಗಿರಲು 7 Daily Health Tips ಇವುಗಳಲ್ಲಿ ಒಂದಾಗಿದ್ದು ಆದ್ದರಿಂದ ಹಿರಿಯರು ಹೇಳುವಂತೆ “ನಿದ್ದೆಗಣ್ಣಿನವನಿಗೆ ರಾಜ್ಯ ಕೊಟ್ಟರೂ ಬೇಡ”. ಅಂದರೆ ನಿದ್ದೆ ಸರಿಯಾಗಿ ಇಲ್ಲದಿದ್ದರೆ ಮನುಷ್ಯನಿಗೆ ಎಷ್ಟೇ ಆಸ್ತಿ-ಅಂತಸ್ತು ಇದ್ದರೂ ಪ್ರಯೋಜನವಿಲ್ಲ. ನಮ್ಮ ಶರೀರಕ್ಕೆ ನಿದ್ದೆ ಎನ್ನುವುದು ರಾತ್ರಿ ಹೊತ್ತು ಆಗುವ ‘ರಿಪೇರಿ’ ಕೆಲಸವಿದ್ದಂತೆ. ಹಿಂದಿನ ಪೂರ್ವಜರು “ಯಾಕೆ ಬೇಗ ಮಲಗಿ ಬೇಗ” ಏಳಿ ಅಂತ ನಮಗೆ ಈಗ ಅರ್ಥಗುವಂತಿದೆ, ಈಗಿನ ಒತ್ತಡಕ್ಕೆ ಮಣಿದು ಬಹಳಷ್ಟು ಜನರು ಸರಿಯಾದ ಸಮಯಕ್ಕೆ ಮಲಗುವುದಿಲ್ಲ ಇದರಿಂದ ನಮ್ಮ ದೇಹದ ಸಮಯ ಕ್ರಮದಲ್ಲಿ ಏರುಪೇರು ಆಗುತ್ತದೆ. ಆದ್ದರಿಂದ ಪ್ರತಿದಿನ ಸರಿಯಾದ ಸಮಯಕ್ಕೆ ಮಲಗಿ ಮತ್ತು ಎದ್ದರೆ ದೇಹದ ಸಮಯ ಕ್ರಮ (ದೇಹದ ಗಡಿಯಾರ) ಸರಿಯಾಗಿ ಕಾರ್ಯನಿರ್ವಹಿಸುತ್ತದೆ. 7–8 ಗಂಟೆಗಳ ನಿದ್ರೆ ಆರೋಗ್ಯಕ್ಕೆ ಅತ್ಯಗತ್ಯ. ಉತ್ತಮ ನಿದ್ರೆಯು ನಿಮ್ಮ ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುತ್ತದೆ.
ಉಪಯೋಗಗಳು ಹಾಗೂ ತೊಂದರೆಗಳು:
- ಶರೀರಕ್ಕೆ ಸಿಗುವ ‘ಚಾರ್ಜಿಂಗ್’ (Energy Recharge)
- ಮೆದುಳು ಚುರುಕಾಗುತ್ತದೆ (Brain Power)
- ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ಮುಖದ ಕಾಂತಿ ಮತ್ತು ಅಂದ ಹೆಚ್ಚಾಗುತ್ತದೆ (Beauty Sleep)
- ಕೋಪ ಮತ್ತು ಒತ್ತಡ ನಿಯಂತ್ರಣ
ಆರೋಗ್ಯವಾಗಿರಲು 7 Daily Health Tips ಮುಂಜಾನೆಯ ಆರೋಗ್ಯಕರ ಕ್ರಮಗಳನ್ನು ಅನುಸರಿಸುವುದರಿಂದ ಏನು ಲಾಭ?
- ದೇಹವು ಆರೋಗ್ಯಕರವಾಗಿರುತ್ತದೆ
- ಮನಸ್ಸು ಹಗುರವಾಗುತ್ತದೆ
- ದೈನಂದಿನ ಕೆಲಸ ಕಾರ್ಯದಲ್ಲಿ ಏಕಾಗ್ರತೆ ಹೆಚ್ಚುತ್ತದೆ
- ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
Medical desclaimer:
ಈ ಮೇಲಿನ ಎಲ್ಲಾ ಮಾಹಿತಿಯು ಆರೋಗ್ಯ ಸಲಹೆಗಾಗಿ ಮಾತ್ರ. ಆದ್ದರಿಂದ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಅಥವಾ ಅನುಮಾನ(doubts) ಇದ್ದರೆ ದಯವಿಟ್ಟು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಕೊನೆಯ ಮಾತು
- ಮುಂಜಾನೆ ನಾವೆಲ್ಲರೂ ಆರೋಗ್ಯವಾಗಿರಲು 7 Daily Health Tips ಅನುಸರಿಸುವುದು ನಮ್ಮ ಜೀವನದ ಮೌಲ್ಯವನ್ನು ಹೆಚ್ಚು ಮಾಡುವುದಲ್ಲದೆ ನಮ್ಮ ದೇಹವು ಆರೋಗ್ಯದಿಂದಿರುತ್ತದೆ. ಕೆಲವೊಮ್ಮೆ ಸಣ್ಣ ಪುಟ್ಟ ಒಳ್ಳೆಯ ಅಭ್ಯಾಸಗಳು ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ. ಆದ್ದರಿಂದ ಇಂದಿನಿಂದಲೇ ಮುಂಜಾನೆಯನ್ನು ಒಳ್ಳೆಯ ಆರೋಗ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವರಿಂದ ಪ್ರಾರಂಭಿಸಿ ಮತ್ತು ದಿನವಿಡೀ ಉತ್ಸಾಹದಿಂದಿರಿಸಿ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಧನಾತ್ಮಕ ಚಿಂತನೆ — ಇವುಗಳೇ ಉತ್ತಮ ಆರೋಗ್ಯದ ಮೂಲಾಧಾರಗಳು.
ಆರೋಗ್ಯವು ನಮ್ಮ ಜೀವನದ ಅಮೂಲ್ಯ ಸಂಪತ್ತು. ಆದ್ದರಿಂದ ಇಂದೇ ಈ ದೈನಂದಿನ ಆರೋಗ್ಯ ಟಿಪ್ಸ್ ಅನುಸರಿಸಿ, ಆರೋಗ್ಯಕರ ಮತ್ತು ಸಂತೋಷಕರ ಜೀವನದತ್ತ ಮೊದಲ ಹೆಜ್ಜೆ ಇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ!
ಹೆಚ್ಚಿನ ಆರೋಗ್ಯ ಮಾಹಿತಿ ಮತ್ತು ಸಾರ್ವಜನಿಕ ಆರೋಗ್ಯ ಸಲಹೆಗಾಗಿ ಅಧಿಕೃತ ಪುಟವನ್ನು ನೋಡಿ- Ministry of Health & Family Welfare –
https://www.mohfw.gov.in/en/ (WHO) –https://www.who.int/en/
ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಪುಟವನ್ನು ಫಾಲೋ ಮಾಡಿ …
ಇನ್ನಷ್ಟು ಓದಿ…
Kisan Vikas Patra (KVP) 2026: Guaranteed ಹಣ ಡಬಲ್ ಮಾಡುವ Powerful ಸರಕಾರಿ ಯೋಜನೆ!!!
Ranji Trophy Final 2026: 11 ವರ್ಷಗಳ ಬಳಿಕ ಫೈನಲ್ ತಲುಪಿದ ಕರ್ನಾಟಕ – ಜಮ್ಮು ಕಾಶ್ಮೀರ ವಿರುದ್ಧ ಮಹಾಸಂಗ್ರಾಮ!!!